Friday, June 4, 2010

ಸೋರುತಿಹುದು ಬಸ್ಸಿನ ಮಾಳಿಗೆ.

ಬಿ ಎಮ್ ಟಿ ಸಿ ಗೊಂದು ಬಹಿರಂಗ ಓಲೆ...
ಬಿ ಎಮ್ ಟಿ ಸಿ ಒನ್ದು ದೊಡ್ಡ ಸಾರಿಗೆ ಸಂಸ್ಥೆಯಾಗಿದ್ದು, ಇವತ್ತು ಬೆಂಗಳೂರು ಜನರ ಜೀವನಾಡಿಯಾಗಿದೆ.
ದಿನಾಲು ಸುಮಾರು ಲಕ್ಶ್ಯ ಜನರನ್ನು ಸಾಗಿಸುವ ಸಾರಿಗೆ ಬಸ್ಸುಗಳು ಮಳೆಗಾಲದಲ್ಲಿ ಸೋರುತ್ತವೆ. ಯಾವಾಗಲು ಬಸ್ಸಿನಲ್ಲೇ ಪಯಣಿಸುವ ನಮ್ಮಂಥ ಪ್ರಯಾಣಿಕರಿಗೆ ಇದರಿಂದ ತುಂಬಾ ತೊಂದರೆಯಾಗುತ್ತಿದೆ. ಆದಕಾರಣ ಈ ಓಲೆ.

ಗೆ,

ವ್ಯವಸ್ಥಾಪಕರು,

ಬೆಂಗಳೂರು ಮಹಾನಗರ ಸಾರಿಗೆ ಸಮ್ಸ್ಥೆ.

ಬೆನ್ಗಳೂರು.

ವಿಶಯ: ಬಸ್ಸಿನ ಮಾಳಿಗೆ ಸೋರುವ ಕುರಿತು.

ಮಾನ್ಯ ವ್ಯವಸ್ಥಾಪಕರಿಗೆ,

ಮಾನ್ಯರೆ, ಬೆನ್ಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಲವಾರು ಜನಪ್ರೀಯ ಕಾರ್ಯಕ್ರಮಗಳ ಮೂಲಕ ಜನರ ಮನ ಗೆದ್ದಿದೆ.

ಆದರೆ ಹಲವು ಬಸ್ಸುಗಳಲ್ಲಿ ಕೆಲವು ಸಮಸ್ಯೆಗಳಿವೆ..

೧. ಸಂಸ್ಥೆಯ ಶೇಕಡಾ ೬೦ ವಾಹನಗಳ ಮಾಳಿಗೆ ಸೋರುತ್ತದೆ.

ಇನ್ತಹ ಮಳೆಗಾಲದ ದಿನಗಳಲ್ಲಿ ಪ್ರಯಾಣಿಕರು ಪರಿತಪಿಸುವನ್ತಾಗಿದೆ. ಬಸ್ಸಿನ ಕಿಟಕಿಗಳು ಸರಿಯಾಗಿ ಮುಚ್ಚೋದಕ್ಕೆ ತೆರೆಯೋದಕ್ಕೆ ಬರುವುದಿಲ್ಲ.

ಬಸ್ಸಿನ ಮಾಳಿಗೆ ಎಲ್ಲೆಂದರಲ್ಲಿ ಸೋರುತ್ತಿರುತ್ತದೆ. ಮತ್ತು ಸೀಟುಗಳ ಮೆಲೆ ನೀರು ಬಿದ್ದು ಕುಳಿತ ಪ್ರಯಾಣಿಕರಿಗೂ ತೊಂದರೆ ಉಂಟಾಗುತ್ತದೆ.

ಯೋಚನೆ ಮಾಡಿ ದಿನಕ್ಕೆ ಲಕ್ಶಗಟ್ಟಲೆ ಪ್ರಯಾಣಿಕರನ್ನು ಸಾಗಿಸುವ ಬಿ ಎಮ್ ಟಿ ಸಿ. ಇದರ ಬಗ್ಗೆ ಗಮನ ಕೊಟ್ಟಂತಿಲ್ಲ.

೨. ಟಾಟಾ ಮಾರ್ಕೋಪೊಲೊ ಬಸ್ಸು ನೋಡಲು ಚೆನ್ನಾಗಿದೆ ಆದರೆ ಜನರ ಮನ ಗೆಲ್ಲುವಲ್ಲಿ ವಿಫಲವಾಗಿದೆ.

ಅದರ ಅಡಚನೆಗಳು...

ವಾಯು ಮತ್ತು ಮಾಲಿನ್ಯ.. ಈ ಬಸ್ಸುಗಳು ತುಂಬ ವಾಯುಮಾಲಿನ್ಯ ಮಾಡುತ್ತವೆ ಹಾಗೂ ಕರ್ಕಶ ಶಬ್ದದೊನ್ದಿಗೆ ಕಿವಿ ಗಡಚಿಕ್ಕುತ್ತವೆ.

ವ್ಯವಸ್ಥಾಪಕರು ಈ ಮೇಲಿನ ಅಡಚಣೆಗಳನ್ನು ಗಮನಿಸಿ, ಗುಣಮಟ್ಟವನ್ನು ಸುಧಾರಿಸಲು ಒತ್ತು ಕೊಡಬೇಕು.... ಮತ್ತೆ ಈ ಬಗ್ಗೆ ಗಮನವಹಿಸಿ ಸುಧಾರಣೆ ತರುತ್ತೀರೆನ್ದು ಭಾವಿಸಿದ್ದೆನೆ.



ಇಂದ,

ಗಿರೀಶ ರಾಜನಾಳ.

ಶಿವನಗರ, ಬೆನ್ಗಳೂರು.

೯೭೩೯೮೬೬೬೧೧

ಇನ್ನೂ ಕೆಲವು ಸಮಸ್ಯೆಗಳಿದ್ದರೆ ನನ್ನೊನ್ದಿಗೆ ಹನ್ಚಿಕೊಳ್ಳಿ. ಬನ್ನಿ ಬಿ ಎಮ್ ಟಿ ಸಿ ಅವರಿಗೆ ದೂರು ನೀಡೋಣ.
http://www.bmtcinfo.com/sitekan/BSComplaints.jsp